ಡೆನ್ನನ ಡೆನ್ನನ
ಬೆಳ್ತಂಗಡಿ ಇದೇ ಬರುವ ಭಾನುವಾರ (Nov. 20) ದಂದು ಡೆನ್ನನ ಡೆನ್ನನ ಕಾರ್ಯಕ್ರಮವು ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ, ಯುವವಾಹಿನಿ (ರಿ) ಬೆಳ್ತಂಗಡಿ ಆತಿಥ್ಯದಲ್ಲಿ ತುಳುನಾಡಿನ ಉಭಯ ಜಿಲ್ಲೆಗಳ ಅಂತರ್ ಘಟಕ ಸಾಂಸ್ಕೃತಿಕ ವೈಭವ ಡೆನ್ನನ ಡೆನ್ನನ, ಬಿಲ್ಲವ ಸಮಾಜದ ದಿಗ್ಗಜರ ಒಗ್ಗೂಡುವಿಕೆಯಲ್ಲಿ ಬಹು ದೊಡ್ಡ ಕಾರ್ಯಕ್ರಮ ನಡೆಯಲಿದೆ.
ಸ್ಥಳ:- ಶ್ರೀ ನಾರಾಯಣ ಗುರು ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಕಲ್ಯಾಣ ಮಂಟಪ ಬೆಳ್ತಂಗಡಿ
ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರ ಮಹಿಮೆ ಸಾರುವ ಭಕ್ತಿಸಾರದ ಸಿ.ಡಿ ಈಗಾಗಲೇ ಬಿಡುಗಡೆಗೊಂಡಿದ್ದು ಈ ಸಿ.ಡಿ ಡೆನ್ನನ ಡೆನ್ನನ ಕಾರ್ಯಕ್ರಮದ ಸ್ಥಳದಲ್ಲಿ ಲಭ್ಯವಿರಲಿದೆ. ಈ ಸಿ.ಡಿ ಯ ಬೆಲೆಯು 100 ರೂ ಆಗಿರುತ್ತದೆ.
ಶ್ರೀ ಸುಧಾಕರ್ ಸುವರ್ಣ ತಿಂಗಳಾಡಿರವರ ಸಾಹಿತ್ಯದಲ್ಲಿ, ಶ್ರೀ ಸುರೇಶ್ ಸಾಲಿಯಾನ್ ಬಜಗೋಳಿ ಹಾಗೂ ಶ್ರೀಮತಿ ನಮಿತಾ ಪ್ರೇಮ್ ರವರ ಸುಮಧುರ ಕಂಠದಲ್ಲಿ ನಿರ್ಮಾಣಗೊಂಡಿದೆ, ಸಿ.ಡಿಯಿಂದ ಬಂದಂತಹ ಎಲ್ಲಾ ಆದಾಯವು ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳಿಗೆ ಬಳಕೆಯಾಗಲಿದೆ ಎಂದು ನಿರ್ಮಾತೃ ಶ್ರೀ ರಮೇಶ್ ಸಾಲಿಯಾನ್ ಬಜಗೋಳಿಯವರು ಘೋಷಿಸಿದ್ದು, ಎಲ್ಲಾ ಭಕ್ತಾಭಿಮಾನಿಗಳು ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸೋಣ.
ಡೆನ್ನನ ಡೆನ್ನನ ಕಾರ್ಯಕ್ರಮಕ್ಕೆ ಶುಭವನ್ನು ಕೋರುತ್ತಾ, ತಮ್ಮೆಲ್ಲರನ್ನು ಪ್ರೀತಿಯಿಂದ ಆಮಂತ್ರಿಸುತ್ತಿದ್ದೇವೆ.
ಶ್ರೀ ಕೋಟಿ ಚೆನ್ನಯ ಮೂಲ ಸ್ಥಾನ ಸೇವಾ ಸಮಿತಿ, ಗೆಜ್ಜೆಗಿರಿ ನಂದನ ಬಿತ್ತ್ ಲ್
No comments:
Post a Comment