Thursday, 24 October 2019

ಮುಂಬೈ ಸಮಾಲೋಚನಾ ಸಭೆ

ಇಂದು ಆ. 24ರ ಗುರುವಾರದಂದು ಬಿಲ್ಲವ ಭವನ ಸಾಂತಾಕ್ರೂಜ್ ಪೂರ್ವ  ಇಲ್ಲಿ ಬಿಲ್ಲವ ಮಹಾ ಮಂಡಲದ ಗೌರಾಧ್ಯಕ್ಷರಾದ ಶ್ರೀ ಜಯ ಸಿ. ಸುವರ್ಣ ಇವರ ನೇತೃತ್ವದಲ್ಲಿ  ಕೋಟಿ ಚೆನ್ನಯರ ಜನ್ಮಸ್ಥಳ ಅಪ್ಪೆ ದೇಯಿ ಬೈದೆತಿಯ ಮೂಲಸ್ಥಾನ ನಂದನ ಬಿತ್ತಿಲ್ ಗೆಜ್ಜೆಗಿರಿಯ ಜೀರ್ಣೋದ್ಧಾರದ ಬಾಕಿಯಿರುವ ಕಾರ್ಯ  ಯೋಜನೆಯ ಬಗ್ಗೆ  ಸಮಾಲೋಚನಾ ಸಭೆ ನಡೆಯಿತು.
 ಈ ಸಂದರ್ಭದಲ್ಲಿ ಶ್ರೀ ಜಯ ಸುವರ್ಣರು ಮುಂಬಯಿ ದಾನಿಗಳಿಂದ  ನಿಧಿ ಸಂಗ್ರಹ ಮಾಡಿ ಜೀರ್ಣೋದ್ಧಾರ ಕಾರ್ಯವನ್ನು ಪೂರ್ಣಗೊಳಿಸಿ  ಶ್ರೀಘದಲ್ಲೇ  ಲೋಕಾರ್ಪಣೆಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಲು ವಿನಂತಿಸಿದರು. 
ಸಮಾಲೋಚನಾ ಸಭೆಯಲ್ಲಿ ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಪೂಜಾರಿ, ಬಿಲ್ಲವ ಮಹಾ ಮಂಡಲದ ಅಧ್ಯಕ್ಷರಾದ ಡಾ.ರಾಜ್ ಶೇಖರ್ ಕೋಟ್ಯಾನ್, ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ನಿಕಟಪೂರ್ವ ಅಧ್ಯಕ್ಷರಾದ ಶ್ರೀನಿತ್ಯಾನಂದ   ಡಿ. ಕೋಟ್ಯಾನ್, ಶ್ರೀ ಹರೀಶ್ ಅಮೀನ್ ಭಾರತ್ ಬ್ಯಾಂಕ್ ನ ನಿರ್ದೇಶಕರಾದ ಶ್ರೀಎಲ್.ವಿ.ಅಮೀನ್, ಶ್ರೀ ಭಾಸ್ಕರ್ ಸಾಲಿಯಾನ್. ಶ್ರೀ ಪುರುಷೋತ್ತಮ್ ಕೋಟ್ಯಾನ್,ಶ್ರೀ ಮೋಹನ್ ದಾಸ್ ಪೂಜಾರಿ ಸೇರಿದಂತೆ , ಶ್ರೀ ನಿಲೇಶ್ ಪೂಜಾರಿ ಪಲಿಮಾರು, ಬೋಳ ರವಿ ಪೂಜಾರಿ, ಶ್ರೀ ದಿನೇಶ್  ಅಮೀನ್ .ಶ್ರೀನಾಗೇಶ್ ಕೋಟ್ಯಾನ್, ಶ್ರೀ ರವೀಂದ್ರ ಕೋಟ್ಯಾನ್, ಶ್ರೀ ದಯಾನಂದ್ ಪೂಜಾರಿ ಶ್ರೀಅಶೋಕ್ ಕುಕ್ಯಾನ್, ಶ್ರೀ ಶಂಕರ್ ಪೂಜಾರಿ, ಶ್ರೀ ರತ್ನಾಕರ ಪೂಜಾರಿ ಬಿವಂಡಿ ಶ್ರೀ ಪ್ರಭಾಕರ್ ಪೂಜಾರಿ ಬೆಳುವಾಯಿ ಸೇರಿಂದಂತೆ ಮತ್ತಿತ್ತರು ಉಪಸ್ಥಿತರಿದ್ದರು

No comments:

Post a Comment