ಗೆಜ್ಜೆಗಿರಿ ಪುನರುತ್ಥಾನ ಮಹತ್ವದ ಘಟ್ಟದಲ್ಲಿ....
ಧರ್ಮಚಾವಡಿ ಮಾಡಿನ ಕೆಲಸ ಆರಂಭ....
ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಗೆಜ್ಹೆಗಿರಿ ನಂದನ ಬಿತ್ತ್ ಲ್ ನಲ್ಲಿ ನಡೆಯುತ್ತಿರುವ ಪುನರುತ್ಥಾನ ಕಾಮಗಾರಿ ಈಗ ನಿರ್ಣಾಯಕ ಹಂತದಲ್ಲಿದೆ..
ಪ್ರತಿಷ್ಠಾ ಕಲಶೋತ್ಸವದತ್ತ ಮುಖ ಮಾಡಿರುವ ಪರಮ ಪಾವನ ಕ್ಷೇತ್ರದಲ್ಲಿ ಇಂದು (ಅಕ್ಟೋಬರ್ 29) ಧರ್ಮ ಚಾವಡಿಯ ಮಾಡಿನ ಕೆಲಸಕ್ಕೆ ಚಾಲನೆ ನೀಡಲಾಯಿತು. ಮುಂದಿನ ಮೂರು ವಾರಗಳ ಅವಧಿಯಲ್ಲಿ ಸ್ತಪತಿ ಉಮೇಶ್ ಬಲ್ಪ ಅವರ ನೇತೃತ್ವದ ಕುಶಲ ಕರ್ಮಿಗಳ ತಂಡ ಮಾಡಿನ ಕೆಲಸ ಪೂರ್ತಿ ಮಾಡಿ ಕೊಡಲಿದ್ದಾರೆ. ಅದರ ಬೆನ್ನಲ್ಲೆ ಹಂಚು ಅಳವಡಿಕೆ ನಡೆಯಲಿದೆ.
ಇಂದು ಬೆಳಗ್ಗೆ ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿಯವರ ನೇತೃತ್ವದಲ್ಲಿ,
ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾದ ಜಯಂತ ನಡುಬೈಲ್ ಉಪಸ್ಥಿತಿಯಲ್ಲಿ
ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಬಳಿಕ ವಾಲ್ ಪ್ಲೇಟ್ ಮುಹೂರ್ತ ಮಾಡುವ ಮೂಲಕ ಮಾಡಿನ ಕೆಲಸಕ್ಕೆ ಚಾಲನೆ ನೀಡಲಾಯಿತು.
ಮಾಡಿನ ಕೆಲಸದಲ್ಲಿ ಧೂಮಾವತಿ ಕರಸೇವಾ ಸಮಿತಿಯ ಶಾಂತಿಗೋಡು ಶಾಖೆ ಮತ್ತು ಕೆಲೆಂಬಿರಿ ಶಾಖೆಯ ಕರಸೇವಕರು ಸ ಹಕರಿಸಿದರು.
ಇದೇ ಸಂದರ್ಭ ಗೆಜ್ಜೆಗಿರಿ ಪುತ್ತೂರು ತಾಲೂಕು ಸಮಿತಿಯ ಸಭೆಯೂ ನಡೆಯಿತು. ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿ ಗುತ್ತು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಕಾರ್ಯದಲ್ಲಿ ಸಮಿತಿಯು ತ್ವರಿತ ಕೆಲಸ ಮಾಡುವುದಾಗಿ ನಿರ್ಧರಿಸಲಾಯಿತು.
ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಜಯಂತ ನಡುಬೈಲ್, ಕಾರ್ಯದರ್ಶಿ ಸುಧಾಕರ ಸುವರ್ಣ, ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಧೂಮಾವತಿ ಕರಸೇವಾ ಸಮಿತಿಯ ಅಧ್ಯಕ್ಷ ಉದಯ ಕುಮಾರ್ ಕೋಲಾಡಿ, ಕಾರ್ಯದರ್ಶಿ ದಯಾನಂದ ಆಲಂಕಾರ್, ಪದಾಧಿಕಾರಿಗಳಾದ ನಾರಾಯಣ ಪೂಜಾರಿ ನಂಜೆ, ನಾರಾಯಣ ಪೂಜಾರಿ ಮಡ್ಯಂಗಳ, ನಾರಾಯಣ ಪೂಜಾರಿ ಇರ್ದೆ,ಚಂದ್ರಶೇಖರ ಪರಕ್ಕಮೆ,
ತಾಲೂಕು
ಸಮಿತಿ ಕಾರ್ಯದರ್ಶಿ ಶಶಿಧರ ಕಿನ್ನಿಮಜಲ್, ಯುವವಾಹಿನಿ ಅಧ್ಯಕ್ಷರಾದ ನಾರಾಯಣ ಪೂಜಾರಿ ಕುರಿಕ್ಕಾರ, ಕ್ಷೇತ್ರದ ಹಿರಿಯರಾದ ಲೀಲಾವತಿ ಪೂಜಾರಿ, ಆನುವಂಶಿಕರಾದ ಸವಿತಾ ಮಹಾಬಲ ಪೂಜಾರಿ,
ಪ್ರಮುಖರಾದ ಬಾಬು ಪೂಜಾರಿ, ಉಮೇಶ್ ಕಾರ್ಲಾಡಿ, ಕೋಚಣ್ಣ ಪೂಜಾರಿ,ಸದಾನಂದ ಆಲಂಕಾರ್, ಮಹೇಶ್ಚಂದ್ರ ಸಾಲಿಯಾನ್, ಮಾಧವ ಸಾಲಿಯಾನ್, ಚಂದ್ರಕಾಂತ ಶಾಂತಿವನ, ಕರಿಯಪ್ಪ ಪೂಜಾರಿ, ಬಾಬು ಪೂಜಾರಿ ಇದ್ಪಾಡಿ, ಜಯಂತ ಕೆಂಗುಡೇಲು, ಕೇಶವ ಪೂಜಾರಿ ಬೆದ್ರಾಳ, ನಾಗೇಶ್ ಬಲ್ನಾಡ್ ಮತ್ತಿತರರು ಉಪಸ್ಥಿತರಿದ್ದರು.
No comments:
Post a Comment