ಕೊಡಗು ಜಿಲ್ಲೆಯ ಶೂಂಠಿಕೊಪ್ಪದಲ್ಲಿ ಇಂದು ತಾರೀಕು ಡಿಸೆಂಬರ್ 12 ರಂದ್ದು ನಡೆದ ಕೊಡಗು ಜಿಲ್ಲಾ ಮಟ್ಟದ ಕೋಟಿ-ಚೆನ್ನಯ ಕ್ರೀಢಾಕೂಟ 2016 ರ ಬಿರುವೆರೆ ಚಾವಡಿ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಕಿಕ್ಕಿರಿದು ಸೇರಿದ ಬಿಲ್ಲವರ ಬಾಂಧವರ ಜನಸ್ತೋಮದಲ್ಲಿ ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರದ ಮಹಿಮೆಯನ್ನು ಸಾರುವ ಗೆಜ್ಜೆಗಿರಿ ನಂದನ ತುಳು ಭಕ್ತಿಗೀತೆ ಸಿ.ಡಿ ಕೇಸೆಟನ್ನು ಬಿಡುಗಡೆ ಮಾಡಲಾಯಿತು ಈ ಸಂದರ್ಭದಲ್ಲಿ ಕ್ಷೇತ್ರಾಡಳಿತದ ಸಮಿತಿಯ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಪೂಜಾರಿ, ಕಾರ್ಯಧ್ಯಕ್ಷರಾದ ಶ್ರೀ ಪಿತಾಂಬರ್ ಹೆರಾಜೆ, ಶ್ರೀ ಜಯಂತ ನಡುಬೈಲು, ಶ್ರೀ ಉಲ್ಲಾಸ್ ಕೊಟ್ಯಾನ್ ಹಾಗೂ ಕೊಡಗು ಜಿಲ್ಲಾ ಬಿಲ್ಲವ ಅಧ್ಯಕ್ಷರಾದ ಶ್ರೀ ಆನಂದ ರಘು, ಆರು ತಾಲೂಕಿನ ಬಿಲ್ಲವ ಅಧ್ಯಕ್ಷರು, ಮೂರು ಸ್ಥಳಿಯ ಶಾಸಕರು, ಗಣ್ಯ ಅತಿಥಿಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿ ಸೇರಿದ ಬಿಲ್ಲವ ಬಾಂಧವರು ಪಾಲ್ಗೊಂಡು ಯಶಸ್ವಿಯಾಗಿ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ
ಕೊಡಗು ಜಿಲ್ಲಾ ಬಿಲ್ಲವ ಸಮಾಜ ಬಾಂಧವರಿಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರದ ಸರ್ವ ಶಕ್ತಿಗಲು ಅನುಗ್ರಹಿಸಲಿ.
ಸ್ವಾಮಿ ಬ್ರಹ್ಮ ಬೈದೆರ್ಲೆ🙏
No comments:
Post a Comment