Tuesday, 18 October 2016

ಗೆಜ್ಜೆಗಿರಿ

ಕೋಟಿ ಚೆನ್ನಯ ಮೂಲಸ್ಥಾನ
ಪುನರುತ್ಥಾನಕ್ಕೆ ಸಹಕರಿಸಿ

ಸಮಸ್ತ ಜನಮಾನಸದ ಪಾಲಿಗೆ ಸುವರ್ಣ ಘಳಿಗೆಯೊಂದು ಸಮೀಪಿಸುತ್ತಿದೆ. ಅವಳಿ ವೀರರು ಕೋಟಿ ಚೆನ್ನಯರ ಮೂಲಸ್ಥಾನವಾದ ಪಡುಮಲೆಯ ಗೆಜ್ಜೆಗಿರಿ ನಂದನ ಬಿತ್ತ್ ಲ್ ನಲ್ಲಿ ಮೂಲಸ್ಥಾನ ಗರಡಿ ನಿರ್ಮಾಣದ ಕ್ಷಣಗಣನೆ ಆರಂಭಗೊಂಡಿದೆ.
ಇದೇ ಬರುವ ನವೆಂಬರ್ 12 ಮತ್ತು 13ರಂದು ಕ್ಷೇತ್ರದಲ್ಲಿ ವೈಭವದ ನೇಮೋತ್ಸವ ನಡೆಯಲಿದೆ. 12ರಂದು ರಾತ್ರಿ ನೇಮೋತ್ಸವ ಆರಂಭ. 13ರಂದು ಮುಂಜಾನೆ ಕ್ಷೇತ್ರದ ಆದಿ ದೈವ ಧೂಮಾವತಿ ನೇಮೋತ್ಸವ. ಈ ಸಂದರ್ಭ ಯಜಮಾನನಿಗೆ ಧೂಮಾವತಿ ದೈವದ ಅಮೃತ ಹಸ್ತದಿಂದ ಗಡಿ ಪಟ್ಟಾಧಿಕಾರ ನಡೆಯಲಿದೆ. ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಇದಾದ ಬಳಿಕ ಬಾಲಾಲಯ ಪ್ರತಿಷ್ಠೆ ಮತ್ತು ಮಹಾ ಅನ್ನ ಸಂತರ್ಪಣೆ ನಡೆಯಲಿದೆ.
2017ರ ಜನವರಿ ಒಂದರಂದು ಇನ್ನೊಂದು ಮಹಾನ್ ಘಟ್ಟ ನಡೆಯಲಿದೆ. ಅಂದು ಬೆಳಗ್ಗೆ ಶುಭ ಮುಹೂರ್ತದಲ್ಲಿ ಕೋಟಿ - ಚೆನ್ನಯ ಮೂಲಸ್ಥಾನ ಗರಡಿ, ಗುರು ಸಾಯನ ಬೈದ್ಯ - ಮಾತೆ ದೇಯಿ ಬೈದ್ಯೆತಿ ಧರ್ಮಚಾವಡಿ, ಮಾತೆಯ ಮಹಾ ಸಮಾಧಿ, ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ, ಧೂಮಾವತಿ ದೈವಸ್ಥಾನ, ಕುಪ್ಪೆ ಪಂಜುರ್ಲಿ ದೈವಸ್ಥಾನ, ಬೆರ್ಮೆರ್ ಗುಂಡ, ಕಲ್ಲಾಲ್ದಾಯ ಕಟ್ಟೆ ಮತ್ತು ಮಹಾದ್ವಾರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯಲಿದೆ.
ಈ ಎಲ್ಲ ಕಾರ್ಯಕ್ರಮದಲ್ಲಿ ಭಕ್ತ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪ್ರಾರ್ಥನೆ. ಅಂತೆಯೇ ಕ್ಷೇತ್ರ ನಿರ್ಮಾಣ ಕಾರ್ಯಕ್ಕೆ ತನು - ಮನ - ಧನಗಳ ತ್ರಿಕರಣ ಪೂರ್ವಕ ಸೇವೆ ಸಲ್ಲಿಸಬೇಕಾಗಿ ಪ್ರಾರ್ಥನೆ.

- ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್
ಕೋಟಿ - ಚೆನ್ನಯ ಮೂಲಸ್ಥಾನ,
ಬಡಗನ್ನೂರು ಗ್ರಾಮ, ಪಡುಮಲೆ, ಪುತ್ತೂರು ತಾಲೂಕು ದ.ಕ.

No comments:

Post a Comment