Tuesday, 25 October 2016

25/10/16

ಶ್ರೀ ಕ್ಷೇತ್ರ ಗೆಜ್ಜೆಗಿರಿ ಧೂಮಾವತಿ ಹಾಗೂ ಪರಿವಾರ ದೈವಗಳ ನೇಮೋತ್ಸವದ ಪೂರ್ವಭಾವಿ ಸಭೆಯ‌ ಮುನ್ನ ಧೂಮಾವತಿ ಸಾನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

25/10/16

ಕೋಟಿ ಚೆನ್ನಯ ಮೂಲ ಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ಗೆ ಬೆಳ್ತಂಗಡಿ ಸಮಿತಿಯ ಪ್ರಮುಖರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.

Sunday, 23 October 2016

23/10/16

ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ಗೆ ಮಂಗಳೂರು ತಾಲೂಕಿನ ಗ್ರಾಮಾಂತರ ಭಾಗದ ನೂರೈವತ್ತು ಬಿಲ್ಲವ ಸಮಾಜ ಬಾಂಧವರು ಭಾನುವಾರ ಭೇಟಿ ನೀಡಿ ಪ್ರಸಾದ ಸ್ವೀಕರಿಸಿ ಅನ್ನದಾನ ಪಡೆದರು.

Location

Shree Kshetra Gejjegiri Nandana Bitthl https://goo.gl/maps/DYd2csuSdhz

Saturday, 22 October 2016

ಸುರಿಯ

ಗೆಜ್ಜೆಗಿರಿಗೆ ಬಂತು
ಕೋಟಿ ಚೆನ್ನಯರ ಸುರಿಯ

450 ವರ್ಷಗಳ ಹಿಂದೆ ತಾವು ಓಡಾಡಿ ಬೆಳೆದಿದ್ದ ಪಡುಮಲೆಯ ಗೆಜ್ಜೆಗಿರಿ ನಂದನ ಬಿತ್ತ್ ಲ್ ಗೆ ಅವಳಿ ವೀರರು ಕೋಟಿ ಚೆನ್ನಯರು ಮತ್ತೆ ಬರುವ ಕಾಲ ಸನ್ನಿಹಿತವಾಗಿದೆ. ಸಾಯನ ಬೈದ್ಯರು ಮತ್ತು ಮಾತೆ ದೇಯಿ ಬೈದ್ಯೆತಿಯ ಮೂಲಸ್ಥಾನವಾದ ಗೆಜ್ಜೆಗಿರಿಯು ಅವಳಿ ವೀರರಿಗೂ ಮೂಲ ಮನೆಯಾಗಿದ್ದು, ಕ್ಷೇತ್ರದಲ್ಲಿ ಮೂಲಸ್ಥಾನ ಗರಡಿ ನಿರ್ಮಾಣದ ಪ್ರಕ್ರಿಯೆ ಶುರುವಾಗಿದೆ. ಆಗಲೇ ಕೋಟಿ - ಚೆನ್ನಯರು ಇಲ್ಲಿಗೆ ಸುರಿಯ ರೂಪದಲ್ಲಿ ಬಂದಿದ್ದಾರೆ.
ಈ ರೋಮಾಂಚನಕಾರಿ ಕಥೆಯನ್ನು ಓದಿ.
ಇದು ಎರಡು ತಿಂಗಳ ಹಿಂದೆ ನಡೆದ ಘಟನೆ. ಪುತ್ತೂರು ತಾಲೂಕಿನ ಮೂಡಣ ದಿಕ್ಕಿನಲ್ಲಿರುವ ಬಿಲ್ಲವೇತರ ಸಮುದಾಯದ ಜಮೀನಿನಲ್ಲಿ ನಡೆದ ಪ್ರಶ್ನೆಯಲ್ಲಿ ಸೋಜಿಗದ ವಿಚಾರ ಕಂಡು ಬಂತು. ಈ ಜಮೀನಿನಲ್ಲಿ ಹಿಂದೆ ಬಿಲ್ಲವರು ಕೋಟಿ - ಚೆನ್ನಯರನ್ನು ಆರಾಧಿಸಿದ್ದರು. ಹೀಗಾಗಿ ನೀವು ಕೂಡಾ ಆರಾಧಿಸಬೇಕು ಎಂದು. ಅದು ಸಾಧ್ಯವಾಗದಿದ್ದರೆ ಕೋಟಿ- ಚೆನ್ನಯರ ಮೂಲಕ್ಷೆತ್ರಕ್ಕೆ ಸುರಿಯ, ಬಂಗಾರದ ಹೂ ಮತ್ತು ಕುರುಂಟು ಒಪ್ಪಿಸಬೇಕು ಎಂದು ಕಂಡು ಬಂತು. ಕೋಟಿ- ಚೆನ್ನಯರ ಮೂಲಕ್ಷೇತ್ರ ಯಾವುದು ಎಂದು ತಿಳಿಯದ ಆ ಕುಟುಂಬ ಎಣ್ಮೂರು ಆಗಿರಬಹುದು ಎಂದು ಭಾವಿಸಿ ಕೇಳಿತು. ಪ್ರಶ್ನೆಯಲ್ಲಿ ಅದು ಅಲ್ಲ, ವೀರರ ಮೂಲ ಮನೆಗೆ ಒಪ್ಪಿಸಬೇಕು ಎಂದು ಕಂಡು ಬಂತು. ಇದಾದ ಬಳಿಕ ಆ ಮನೆಯವರು ಊರಿನ ಕೆಲವರಲ್ಲಿ ಮಾಹಿತಿ ಪಡೆದು ನೇರವಾಗಿ ಗೆಜ್ಜೆಗಿರಿ ನಂದನ ಕ್ಷೇತ್ರಕ್ಕೆ ಬಂದು ಯಜಮಾನರಲ್ಲಿ ವಿಷಯ ತಿಳಿಸಿದರು. ಆಗ ಅವರಂದರು- ಇದು ಮೂಲಕ್ಷೇತ್ರ ನಿಜ. ಆದರೆ ಕೋಟಿ - ಚೆನ್ನಯರು ಇಲ್ಲಿಗೆ ಸುರಿಯ ಒಪ್ಪಿಸಲು ಬಯಸುತ್ತಾರೋ ಅಥವಾ ಪಡುಮಲೆ ಅರಮನೆಗೆ ಒಪ್ಪಿಸಲು ಬಯಸುತ್ತಾರೊ ಗೊತ್ತಿಲ್ಲ. ಅದನ್ನು ನೀವು ಮತ್ತೆ ಪ್ರಶ್ನೆಯಲ್ಲಿ ಕೇಳಿಕೊಂಡು ಬನ್ನಿ ಎಂದು ಹೇಳುವ ಮೂಲಕ ಪ್ರಾಮಾಣಿಕತೆ ಮೆರೆದರು.
ಅದರಂತೆ ಆ ಮನೆಯವರು ಮತ್ತೆ ಪ್ರಶ್ನೆ ಚಿಂತನಾಕಾರರ ಬಳಿ ತೆರಳಿದರು. ಅಲ್ಲಿ ಗೆಜ್ಜೆಗಿರಿ ಮತ್ತು  ಪಡುಮಲೆ ಅರಮನೆ ಎರಡೂ ಜಾಗವನ್ನು ಚಿಂತಿಸಿದಾಗ -ಪೂರ್ಣ ಪ್ರಮಾಣದಲ್ಲಿ ಗೆಜ್ಜೆಗಿರಿ ನಂದನಕ್ಕೆ ಅರ್ಪಿಸಬೇಕು, ಅದು ಕೋಟಿ - ಚೆನ್ನಯರ ಮೂಲಕ್ಷೇತ್ರ ಎಂದು ಕಂಡು ಬಂತು. ಅದರಂತೆ ಆ ಮನೆಯವರು ಸುರಿಯ, ಬಂಗಾರದ ಹೂ ಮತ್ತು ಕುರುಂಟು ತಂದು ಗೆಜ್ಜೆಗಿರಿ ಕ್ಷೇತ್ರಕ್ಕೆ ಒಪ್ಪಿಸಿದ್ದಾರೆ.
ಮೂಲಸ್ಥಾನ ಗರಡಿ ನಿರ್ಮಾಣಕ್ಕೆ ಮೊದಲೇ, ತಾವು ಗೆಜ್ಜೆಗಿರಿಗೆ ಬರುವುದನ್ನು ಕಾರಣಿಕ ಶಕ್ತಿಗಳು ಸ್ಪಷ್ಟವಾಗಿ ಸೂಚಿಸುವ ಮೂಲಕ ಪವಾಡ ಮೆರೆದಿದ್ದಾರೆ. ಹರಕೆ ರೂಪದಲ್ಲಿ ಬಂದ ಸುರಿಯ ಈಗ ಗೆಜ್ಜೆಗಿರಿಯ ಧೂಮಾವತಿ  ಸಾನಿಧ್ಯದ ಪಾರ್ಶ್ವದಲ್ಲಿ ಕಂಗೊಳಿಸುತ್ತಿದೆ. ಈಗ ತಿಳಿಯಿತೇ ಗೆಜ್ಜೆಗಿರಿ ಮಣ್ಣಿನ ಮಹತ್ವ...!

Tuesday, 18 October 2016

ದೇಯಿ ಬೈದೆತಿ ಮದ್ದು‌ ನೀಡುತ್ತಿದ್ದ ಅಮೃತ‌ ಸಂಜೀವಿನಿ ಪಾತ್ರೆ

ಅಕ್ಕರೆಯ ಕರೆಯೋಲೆ

ಕೋಟಿ ಚೆನ್ನಯ ಮೂಲ ಸ್ಥಾನ
ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್, ಪಡುಮಲೆ
ಆದಿ ದೈವ ಧೂಮಾವತಿ ಸ್ಥಾನ, ಗುರು ಸಾಯನ ಬೈದ್ಯ ಮಾತೆ ದೇಯಿ ಬೈದ್ಯೆತಿ ಮೂಲಸ್ಥಾನ
ಬಡಗನ್ನೂರು ಗ್ರಾಮ, ಪುತ್ತೂರು ತಾಲೂಕು, ದ.ಕ.

{{{ಅಕ್ಕರೆಯ ಕರೆಯೋಲೆ}}}

ಕ್ಷೇತ್ರ ಪುನರುತ್ಥಾನ ಶಿಲನ್ಯಾಸಕ್ಕೆ ಪೂರ್ವಭಾವಿಯಾಗಿ
ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವ, ಯಜಮಾನ ಗಡಿ ಪ್ರದಾನ, ಸ್ವರ್ಣ ನಿಧಿ ಕುಂಭ ಸ್ಥಾಪನೆ ಮತ್ತು ಬಾಲಾಲಯ ಪ್ರತಿಷ್ಠೆ

12-11-2016 ಶನಿವಾರ ದ
13-11-2016 ಭಾನುವಾರ ಮಧ್ಯಾಹ್ನದವರೆಗೆ

ಅವಳಿ ವೀರರು ಕೋಟಿ ಚೆನ್ನಯರ ಮೂಲಸ್ಥಾನವಾದ ಪಡುಮಲೆಯ ಗೆಜ್ಜೆಗಿರಿ ನಂದನ ಬಿತ್ತ್ ಲ್ ನಲ್ಲಿ ಕ್ಷೇತ್ರ ನಿರ್ಮಾಣಕ್ಕೆ ನಡೆಯುವ ಶಿಲನ್ಯಾಸಕ್ಕೆ ಪೂರ್ವಭಾವಿಯಾಗಿ, ಕಾರಣಿಕ ಪುರುಷರು ತಮ್ಮ ಮೂಲಸ್ಥಾನದಲ್ಲಿ ಪೂಜಿಸುತ್ತಿದ್ದ ಗೆಜ್ಜೆಗಿರಿಯ ಆದಿ ದೈವ

ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವ, ಯಜಮಾನ ಗಡಿ ಪ್ರದಾನ, ಸ್ವರ್ಣ ನಿಧಿ ಕುಂಭ ಸ್ಥಾಪನೆ ಹಾಗೂ ಬಾಲಾಲಯ ಪ್ರತಿಷ್ಠೆ

ಕ್ಷೇತ್ರದ ತಂತ್ರಿವರ್ಯರಾದ ಶ್ರೀ ಲೋಕೇಶ್ ಶಾಂತಿ ಅವರ ಮಾರ್ಗದರ್ಶನದಲ್ಲಿ ನಡೆಸುವುದೆಂದು ಗುರು ಹಿರಿಯರಿದ್ದು ನಿಶ್ಚಯಿಸಿರುತ್ತೇವೆ. ಆ ಪ್ರಯುಕ್ತ ತಾವೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ದೈವಗಳ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಬೇಕಾಗಿ ಪ್ರಾರ್ಥಿಸುತ್ತಿದ್ದೇವೆ.

ಶ್ರೀಮತಿ ಲೀಲಾವತಿ ಪೂಜಾರಿ ಮತ್ತು ಮಕ್ಕಳು,       ಆನುವಂಶಿಕ ಆಡಳಿತ ಮೊಕ್ತೇಸರರು

ಕೋಟಿ ಚೆನ್ನಯ ಮೂಲಸ್ಥಾನ ಸೇವಾ ಸಮಿತಿ
ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ಪಡುಮಲೆ, ಪುತ್ತೂರು

ಶ್ರೀ ಜಯ ಸಿ. ಸುವರ್ಣ
ಗೌರವಾಧ್ಯಕ್ಷರು

ಶ್ರೀ ಚಿತ್ತರಂಜನ್
ಕಂಕನಾಡಿ, ಮಂಗಳೂರು
ಅಧ್ಯಕ್ಷರು

ಶ್ರೀ ಪೀತಾಂಬರ ಹೇರಾಜೆ
*ಶ್ರೀ ಜಯಂತ ನಡುಬೈಲು
ಕಾರ್ಯಾಧ್ಯಕ್ಷರು

ಉಪಾಧ್ಯಕ್ಷರುಗಳು
<<<<<<<<<>>>>>>>
ಶ್ರೀ‌ ಸೇಸಪ್ಪ ಕೋಟ್ಯಾನ್ ಬಂಟ್ವಾಳ
ಶ್ರೀಮತಿ ಊರ್ಮಿಳಾ ರಮೇಶ್ ಕುಮಾರ್ ಮಂಗಳೂರು
ಶ್ರೀ ರಾಜಶೇಖರ ಕೋಟ್ಯಾನ್
ಶ್ರೀ ವಿಜಯ ಕುಮಾರ್ ಸೊರಕೆ
ಶ್ರೀ ಶಿವರಾಮ ನೀರ್ಚಾಲ್
ಶ್ರೀ ಶೈಲೇಂದ್ರ ವೈ ಸುವರ್ಣ ಮಂಗಳೂರು
ಶ್ರೀ ಸೋಮನಾಥ ಪೂಜಾರಿ ಅಂಬಲಪಾಡಿ
ಶ್ರೀ ಡಿ. ಆರ್. ರಾಜು ಕಾರ್ಕಳ
ಶ್ರೀ ಕೆ. ಹರೀಶ್ ಕುಮಾರ್ ಬೆಳ್ತಂಗಡಿ

ಶ್ರೀ ರವಿ ಪೂಜಾರಿ ಚಿಲಿಂಬಿ
ಪ್ರಧಾನ ಕಾರ್ಯದರ್ಶಿ

ಶ್ರೀ ಸುಧಾಕರ ಸುವರ್ಣ
ಶ್ರೀ ಉಲ್ಲಾಸ್ ಕೋಟ್ಯಾನ್
ಕಾರ್ಯದರ್ಶಿಗಳು

ಶ್ರೀ ದೀಪಕ್ ಕೋಟ್ಯಾನ್
ಕೋಶಾಧಿಕಾರಿ

ಗೌರವ ಸಲಹೆಗಾರರು
<<<<<<<<<>>>>>>>>>
ಶ್ರೀ ಮಿತ್ರ ಕೋಟ್ಯಾನ್
ಶ್ರೀ ಯಾದವ ಕೋಟ್ಯಾನ್ ಪೆರ್ಮುದೆ
ಶ್ರೀ ಜಯಾನಂದ ಮಂಗಳೂರು
ಶ್ರೀ ಗಂಗಾಧರ್ ಜೆ ಮುಂಬೈ
ಶ್ರೀ ಚಂದ್ರಶೇಖರ ಉಚ್ಚಿಲ್
ಶ್ರೀ ಶೇಖರ ಬಂಗೇರ ನವದೆಹಲಿ
ಶ್ರೀ ರಾಘವ ಅಮಿನ್
ಶ್ರೀ ಅಶೋಕ್ ಸುವರ್ಣ ಕಟಪಾಡಿ
ಶ್ರೀ ದಿನೇಶ್ ಅಮಿನ್ ಕುಂದಾಪುರ
ಶ್ರೀ ಕೇಶವ ಅಂಗಡಿಮಾರ್
ಶ್ರೀ ಜೆ.ವಿ ಸೀತಾರಾಮ್ ಮಂಗಳೂರು
ಶ್ರೀ ಸಂತೋಷ್ ಕುಮಾರ್ ತುಂಬೆ
ಶ್ರೀ ಮೋಹನದಾಸ್ ಬಂಗೇರ
ಶ್ರೀ ರೋಹಿನಾಥ್ ಪಾದೆ
ಶ್ರೀ ಕಿಶೋರ್ ಕುಮಾರ್ ಎರ್ಮಾಳ್
ಶ್ರೀ ಜಗದೀಪ್ ಸುವರ್ಣ
ಶ್ರೀ ಕಮಲಾಕ್ಷ ಬೋಳಾರ್
ಶ್ರೀ ಕರುಣಾಕರ ಕಿದಿಯೂರು

ಅಧ್ಯಕ್ಷರು ಹಾಗೂ ಸರ್ವ ಸದಸ್ಯರು
ತಾಲೂಕು‌ ಮತ್ತು ಜಿಲ್ಲಾವಾರು ಗೆಜ್ಜೆಗಿರಿ ಸೇವಾ ಸಮಿತಿ.

ಗೆಜ್ಜೆಗಿರಿ

ಕೋಟಿ ಚೆನ್ನಯ ಮೂಲಸ್ಥಾನ
ಪುನರುತ್ಥಾನಕ್ಕೆ ಸಹಕರಿಸಿ

ಸಮಸ್ತ ಜನಮಾನಸದ ಪಾಲಿಗೆ ಸುವರ್ಣ ಘಳಿಗೆಯೊಂದು ಸಮೀಪಿಸುತ್ತಿದೆ. ಅವಳಿ ವೀರರು ಕೋಟಿ ಚೆನ್ನಯರ ಮೂಲಸ್ಥಾನವಾದ ಪಡುಮಲೆಯ ಗೆಜ್ಜೆಗಿರಿ ನಂದನ ಬಿತ್ತ್ ಲ್ ನಲ್ಲಿ ಮೂಲಸ್ಥಾನ ಗರಡಿ ನಿರ್ಮಾಣದ ಕ್ಷಣಗಣನೆ ಆರಂಭಗೊಂಡಿದೆ.
ಇದೇ ಬರುವ ನವೆಂಬರ್ 12 ಮತ್ತು 13ರಂದು ಕ್ಷೇತ್ರದಲ್ಲಿ ವೈಭವದ ನೇಮೋತ್ಸವ ನಡೆಯಲಿದೆ. 12ರಂದು ರಾತ್ರಿ ನೇಮೋತ್ಸವ ಆರಂಭ. 13ರಂದು ಮುಂಜಾನೆ ಕ್ಷೇತ್ರದ ಆದಿ ದೈವ ಧೂಮಾವತಿ ನೇಮೋತ್ಸವ. ಈ ಸಂದರ್ಭ ಯಜಮಾನನಿಗೆ ಧೂಮಾವತಿ ದೈವದ ಅಮೃತ ಹಸ್ತದಿಂದ ಗಡಿ ಪಟ್ಟಾಧಿಕಾರ ನಡೆಯಲಿದೆ. ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಇದಾದ ಬಳಿಕ ಬಾಲಾಲಯ ಪ್ರತಿಷ್ಠೆ ಮತ್ತು ಮಹಾ ಅನ್ನ ಸಂತರ್ಪಣೆ ನಡೆಯಲಿದೆ.
2017ರ ಜನವರಿ ಒಂದರಂದು ಇನ್ನೊಂದು ಮಹಾನ್ ಘಟ್ಟ ನಡೆಯಲಿದೆ. ಅಂದು ಬೆಳಗ್ಗೆ ಶುಭ ಮುಹೂರ್ತದಲ್ಲಿ ಕೋಟಿ - ಚೆನ್ನಯ ಮೂಲಸ್ಥಾನ ಗರಡಿ, ಗುರು ಸಾಯನ ಬೈದ್ಯ - ಮಾತೆ ದೇಯಿ ಬೈದ್ಯೆತಿ ಧರ್ಮಚಾವಡಿ, ಮಾತೆಯ ಮಹಾ ಸಮಾಧಿ, ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ, ಧೂಮಾವತಿ ದೈವಸ್ಥಾನ, ಕುಪ್ಪೆ ಪಂಜುರ್ಲಿ ದೈವಸ್ಥಾನ, ಬೆರ್ಮೆರ್ ಗುಂಡ, ಕಲ್ಲಾಲ್ದಾಯ ಕಟ್ಟೆ ಮತ್ತು ಮಹಾದ್ವಾರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯಲಿದೆ.
ಈ ಎಲ್ಲ ಕಾರ್ಯಕ್ರಮದಲ್ಲಿ ಭಕ್ತ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪ್ರಾರ್ಥನೆ. ಅಂತೆಯೇ ಕ್ಷೇತ್ರ ನಿರ್ಮಾಣ ಕಾರ್ಯಕ್ಕೆ ತನು - ಮನ - ಧನಗಳ ತ್ರಿಕರಣ ಪೂರ್ವಕ ಸೇವೆ ಸಲ್ಲಿಸಬೇಕಾಗಿ ಪ್ರಾರ್ಥನೆ.

- ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್
ಕೋಟಿ - ಚೆನ್ನಯ ಮೂಲಸ್ಥಾನ,
ಬಡಗನ್ನೂರು ಗ್ರಾಮ, ಪಡುಮಲೆ, ಪುತ್ತೂರು ತಾಲೂಕು ದ.ಕ.

ಶ್ರೀ ಕ್ಷೇತ್ರದ ಅಭಿವೃದ್ಧಿ ರೂಪುರೇಷೆ