Wednesday, 30 October 2019
Tuesday, 29 October 2019
ದೇಣಿಗೆ
ಪುತ್ತೂರು ತಾಲೂಕು ಬರೆಪ್ಪಾಡಿ ಸಮೀಪದ ಉಮೇಶ್ ಕಾರ್ಲಾಡಿ ಅವರು ಇಂದು ಗೆಜ್ಜೆಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ನಿಧಿ ಸಮರ್ಪಣೆ ಮಾಡಿದರು.
ಧರ್ಮಚಾವಡಿ ಮಾಡಿನ ಕೆಲಸ ಆರಂಭ ಶ್ರೀ ಕ್ಷೇತ್ರ ಗೆಜ್ಜೆಗಿರಿ
ಗೆಜ್ಜೆಗಿರಿ ಪುನರುತ್ಥಾನ ಮಹತ್ವದ ಘಟ್ಟದಲ್ಲಿ....
ಧರ್ಮಚಾವಡಿ ಮಾಡಿನ ಕೆಲಸ ಆರಂಭ....
ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಗೆಜ್ಹೆಗಿರಿ ನಂದನ ಬಿತ್ತ್ ಲ್ ನಲ್ಲಿ ನಡೆಯುತ್ತಿರುವ ಪುನರುತ್ಥಾನ ಕಾಮಗಾರಿ ಈಗ ನಿರ್ಣಾಯಕ ಹಂತದಲ್ಲಿದೆ..
ಪ್ರತಿಷ್ಠಾ ಕಲಶೋತ್ಸವದತ್ತ ಮುಖ ಮಾಡಿರುವ ಪರಮ ಪಾವನ ಕ್ಷೇತ್ರದಲ್ಲಿ ಇಂದು (ಅಕ್ಟೋಬರ್ 29) ಧರ್ಮ ಚಾವಡಿಯ ಮಾಡಿನ ಕೆಲಸಕ್ಕೆ ಚಾಲನೆ ನೀಡಲಾಯಿತು. ಮುಂದಿನ ಮೂರು ವಾರಗಳ ಅವಧಿಯಲ್ಲಿ ಸ್ತಪತಿ ಉಮೇಶ್ ಬಲ್ಪ ಅವರ ನೇತೃತ್ವದ ಕುಶಲ ಕರ್ಮಿಗಳ ತಂಡ ಮಾಡಿನ ಕೆಲಸ ಪೂರ್ತಿ ಮಾಡಿ ಕೊಡಲಿದ್ದಾರೆ. ಅದರ ಬೆನ್ನಲ್ಲೆ ಹಂಚು ಅಳವಡಿಕೆ ನಡೆಯಲಿದೆ.
ಇಂದು ಬೆಳಗ್ಗೆ ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿಯವರ ನೇತೃತ್ವದಲ್ಲಿ,
ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾದ ಜಯಂತ ನಡುಬೈಲ್ ಉಪಸ್ಥಿತಿಯಲ್ಲಿ
ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಬಳಿಕ ವಾಲ್ ಪ್ಲೇಟ್ ಮುಹೂರ್ತ ಮಾಡುವ ಮೂಲಕ ಮಾಡಿನ ಕೆಲಸಕ್ಕೆ ಚಾಲನೆ ನೀಡಲಾಯಿತು.
ಮಾಡಿನ ಕೆಲಸದಲ್ಲಿ ಧೂಮಾವತಿ ಕರಸೇವಾ ಸಮಿತಿಯ ಶಾಂತಿಗೋಡು ಶಾಖೆ ಮತ್ತು ಕೆಲೆಂಬಿರಿ ಶಾಖೆಯ ಕರಸೇವಕರು ಸ ಹಕರಿಸಿದರು.
ಇದೇ ಸಂದರ್ಭ ಗೆಜ್ಜೆಗಿರಿ ಪುತ್ತೂರು ತಾಲೂಕು ಸಮಿತಿಯ ಸಭೆಯೂ ನಡೆಯಿತು. ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿ ಗುತ್ತು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಕಾರ್ಯದಲ್ಲಿ ಸಮಿತಿಯು ತ್ವರಿತ ಕೆಲಸ ಮಾಡುವುದಾಗಿ ನಿರ್ಧರಿಸಲಾಯಿತು.
ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಜಯಂತ ನಡುಬೈಲ್, ಕಾರ್ಯದರ್ಶಿ ಸುಧಾಕರ ಸುವರ್ಣ, ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಧೂಮಾವತಿ ಕರಸೇವಾ ಸಮಿತಿಯ ಅಧ್ಯಕ್ಷ ಉದಯ ಕುಮಾರ್ ಕೋಲಾಡಿ, ಕಾರ್ಯದರ್ಶಿ ದಯಾನಂದ ಆಲಂಕಾರ್, ಪದಾಧಿಕಾರಿಗಳಾದ ನಾರಾಯಣ ಪೂಜಾರಿ ನಂಜೆ, ನಾರಾಯಣ ಪೂಜಾರಿ ಮಡ್ಯಂಗಳ, ನಾರಾಯಣ ಪೂಜಾರಿ ಇರ್ದೆ,ಚಂದ್ರಶೇಖರ ಪರಕ್ಕಮೆ,
ತಾಲೂಕು
ಸಮಿತಿ ಕಾರ್ಯದರ್ಶಿ ಶಶಿಧರ ಕಿನ್ನಿಮಜಲ್, ಯುವವಾಹಿನಿ ಅಧ್ಯಕ್ಷರಾದ ನಾರಾಯಣ ಪೂಜಾರಿ ಕುರಿಕ್ಕಾರ, ಕ್ಷೇತ್ರದ ಹಿರಿಯರಾದ ಲೀಲಾವತಿ ಪೂಜಾರಿ, ಆನುವಂಶಿಕರಾದ ಸವಿತಾ ಮಹಾಬಲ ಪೂಜಾರಿ,
ಪ್ರಮುಖರಾದ ಬಾಬು ಪೂಜಾರಿ, ಉಮೇಶ್ ಕಾರ್ಲಾಡಿ, ಕೋಚಣ್ಣ ಪೂಜಾರಿ,ಸದಾನಂದ ಆಲಂಕಾರ್, ಮಹೇಶ್ಚಂದ್ರ ಸಾಲಿಯಾನ್, ಮಾಧವ ಸಾಲಿಯಾನ್, ಚಂದ್ರಕಾಂತ ಶಾಂತಿವನ, ಕರಿಯಪ್ಪ ಪೂಜಾರಿ, ಬಾಬು ಪೂಜಾರಿ ಇದ್ಪಾಡಿ, ಜಯಂತ ಕೆಂಗುಡೇಲು, ಕೇಶವ ಪೂಜಾರಿ ಬೆದ್ರಾಳ, ನಾಗೇಶ್ ಬಲ್ನಾಡ್ ಮತ್ತಿತರರು ಉಪಸ್ಥಿತರಿದ್ದರು.
Thursday, 24 October 2019
ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್
ಶ್ರೀ ಕ್ಷೇತ್ರದಲ್ಲಿ ಇಂದು ಯುವವಾಹಿನಿ(ರಿ) ವೇಣೂರು ಘಟಕದ ವತಿಯಿಂದ ಕರಸೇವೆ ನಡೆಯಿತು. ಕರಸೇವೆಯಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರಿಗೆ ಕ್ಷೇತ್ರದ ಸರ್ವ ಶಕ್ತಿಗಳು ಅನುಗ್ರಹಿಸಲಿ
ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್
ಗೆಜ್ಜೆಗಿರಿಯಲ್ಲಿ ಕೊಡಿಮರ ತೈಲಾಧಿವಾಸ ಸಂಪನ್ನ...
ಗೆಜ್ಜೆಗಿರಿಯಲ್ಲಿ ಕೊಡಿಮರ ತೈಲಾಧಿವಾಸ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನ ಗೊಂಡಿದೆ.
ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರಿ ಮಹಾಬಲ ಸ್ವಾಮೀಜಿ ಮತ್ತು ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇಗುಲದ ಧರ್ಮದರ್ಶಿ ಶ್ರೀ ಕೃಷ್ಣ ಗುರೂಜಿ ಅವರ ಉಪಸ್ಥಿತಿಯಲ್ಲಿ, ಕ್ಷೇತ್ರದ ತಂತ್ರಿ ಗಳಾದ ಲೋಕೇಶ್ ಶಾಂತಿ ಅವರ ನೇತೃತ್ವದಲ್ಲಿ ಬುಧವಾರ ಕೊಡಿಮರಕ್ಕೆ ಎಳ್ಳೆಣ್ಣೆ ಸೇಚನ ನಡೆಯಿತು. ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಕರಾವಳಿಯ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ಎಳ್ಳೆಣ್ಣೆ ಸಮರ್ಪಿಸಿ ಕೃತಾರ್ಥರಾದರು. ಕ್ಷೇತ್ರಾಡಳಿತ ಸಮಿತಿಯ ಪದಾಧಿಕಾರಿಗಳು, ಕರಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ವಲಯ, ತಾಲೂಕುವಾರು ಗೆಜ್ಜೆಗಿರಿ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಾವಿರಾರು ಭಕ್ತರು ಬೆಳಗ್ಗಿನ ಉಪಾಹಾರ ಮತ್ತು ಮಧ್ಯಾಹ್ನದ ಭೋಜನ ಸವಿದರು..
ಈ ಚಾರಿತ್ರಿಕ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು, ಅಭಿವಂದನೆಗಳು.
🙏🏻🙏🏻🙏🏻🙏🏻🙏🏻💐
ಮುಂಬೈ ಸಮಾಲೋಚನಾ ಸಭೆ
ಇಂದು ಆ. 24ರ ಗುರುವಾರದಂದು ಬಿಲ್ಲವ ಭವನ ಸಾಂತಾಕ್ರೂಜ್ ಪೂರ್ವ ಇಲ್ಲಿ ಬಿಲ್ಲವ ಮಹಾ ಮಂಡಲದ ಗೌರಾಧ್ಯಕ್ಷರಾದ ಶ್ರೀ ಜಯ ಸಿ. ಸುವರ್ಣ ಇವರ ನೇತೃತ್ವದಲ್ಲಿ ಕೋಟಿ ಚೆನ್ನಯರ ಜನ್ಮಸ್ಥಳ ಅಪ್ಪೆ ದೇಯಿ ಬೈದೆತಿಯ ಮೂಲಸ್ಥಾನ ನಂದನ ಬಿತ್ತಿಲ್ ಗೆಜ್ಜೆಗಿರಿಯ ಜೀರ್ಣೋದ್ಧಾರದ ಬಾಕಿಯಿರುವ ಕಾರ್ಯ ಯೋಜನೆಯ ಬಗ್ಗೆ ಸಮಾಲೋಚನಾ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಜಯ ಸುವರ್ಣರು ಮುಂಬಯಿ ದಾನಿಗಳಿಂದ ನಿಧಿ ಸಂಗ್ರಹ ಮಾಡಿ ಜೀರ್ಣೋದ್ಧಾರ ಕಾರ್ಯವನ್ನು ಪೂರ್ಣಗೊಳಿಸಿ ಶ್ರೀಘದಲ್ಲೇ ಲೋಕಾರ್ಪಣೆಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಲು ವಿನಂತಿಸಿದರು.
ಸಮಾಲೋಚನಾ ಸಭೆಯಲ್ಲಿ ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಪೂಜಾರಿ, ಬಿಲ್ಲವ ಮಹಾ ಮಂಡಲದ ಅಧ್ಯಕ್ಷರಾದ ಡಾ.ರಾಜ್ ಶೇಖರ್ ಕೋಟ್ಯಾನ್, ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ನಿಕಟಪೂರ್ವ ಅಧ್ಯಕ್ಷರಾದ ಶ್ರೀನಿತ್ಯಾನಂದ ಡಿ. ಕೋಟ್ಯಾನ್, ಶ್ರೀ ಹರೀಶ್ ಅಮೀನ್ ಭಾರತ್ ಬ್ಯಾಂಕ್ ನ ನಿರ್ದೇಶಕರಾದ ಶ್ರೀಎಲ್.ವಿ.ಅಮೀನ್, ಶ್ರೀ ಭಾಸ್ಕರ್ ಸಾಲಿಯಾನ್. ಶ್ರೀ ಪುರುಷೋತ್ತಮ್ ಕೋಟ್ಯಾನ್,ಶ್ರೀ ಮೋಹನ್ ದಾಸ್ ಪೂಜಾರಿ ಸೇರಿದಂತೆ , ಶ್ರೀ ನಿಲೇಶ್ ಪೂಜಾರಿ ಪಲಿಮಾರು, ಬೋಳ ರವಿ ಪೂಜಾರಿ, ಶ್ರೀ ದಿನೇಶ್ ಅಮೀನ್ .ಶ್ರೀನಾಗೇಶ್ ಕೋಟ್ಯಾನ್, ಶ್ರೀ ರವೀಂದ್ರ ಕೋಟ್ಯಾನ್, ಶ್ರೀ ದಯಾನಂದ್ ಪೂಜಾರಿ ಶ್ರೀಅಶೋಕ್ ಕುಕ್ಯಾನ್, ಶ್ರೀ ಶಂಕರ್ ಪೂಜಾರಿ, ಶ್ರೀ ರತ್ನಾಕರ ಪೂಜಾರಿ ಬಿವಂಡಿ ಶ್ರೀ ಪ್ರಭಾಕರ್ ಪೂಜಾರಿ ಬೆಳುವಾಯಿ ಸೇರಿಂದಂತೆ ಮತ್ತಿತ್ತರು ಉಪಸ್ಥಿತರಿದ್ದರು
Subscribe to:
Posts (Atom)