"ಮೂವ್ವರೆ" ಕನ್ನಡ ಚಲನಚಿತ್ರ ಮುಹೂರ್ತ ಸಮಾರಂಭವು ದಿನಾಂಕ 6-06-2017 ಮಂಗಳವಾರ ಸಂಜೆ 4:00 ಗಂಟೆಗೆ ಮಾತೆ ದೇಯಿಬೈದ್ಯೆತಿ - ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್ ನ ಪುಣ್ಯ ನೆಲದಲ್ಲಿ ಯಶಸ್ವಿಯಾಗಿ ನೆರವೇರಿತು.
ಮೂವ್ವರೆ ಚಲನ ಚಿತ್ರದ ಯಶಸ್ವಿಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಧೂಮಾವತಿಯ ಸಾನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮೂವ್ವರೆ ಚಲನ ಚಿತ್ರ ತಂಡ ಹಾಗೂ ಗೆಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಕಾರ್ಯಧ್ಯಕ್ಷರು ನಿವೃತ್ತ ಎಸ್.ಪಿ ಪೀತಾಂಬರ ಹೇರಾಜೆ, ಜಯಂತ ನಡುಬೈಲ್, ರವಿ ಪೂಜಾರಿ ಚಿಲಿಂಬಿ, ದೀಪಕ್ ಕೋಟ್ಯಾನ್, ಶ್ರೀಧರ್ ಪೂಜಾರಿ, ಶೇಖರ್ ಬಂಗೇರ, ಹರೀಶ್ ಕುಮಾರ್ ಬೆಳ್ತಂಗಡಿ, ರಮೇಶ್ ಪೂಜಾರಿ ಬೆಳ್ತಂಗಡಿ, ಸುಂದರ ಪೂಜಾರಿ ಸುಳ್ಯ ಹಾಗೂ ಚಲನಚಿತ್ರ ತಂಡದ ಸದಸ್ಯರೊಂದಿಗೆ ಇನ್ನಿತರರು ಉಪಸ್ಥಿತರಿದ್ದು ಮೂವ್ವರೆ ಚಲನ ಚಿತ್ರದ ಯಶಸ್ವಿಗೆ ಶುಭ ಹಾರೈಸಿದರು..
ಸಮಸ್ತ ಭಕ್ತ ಸಮುದಾಯಕ್ಕೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಸರ್ವ ಶಕ್ತಿಗಳು ಅನುಗ್ರಹಿಸಲಿ..
No comments:
Post a Comment